uBO Lite (uBOL) ಒಂದು MV3-ಆಧಾರಿತ ವಿಷಯ ನಿರ್ಬಂಧಕವಾಗಿದೆ. ಡೀಫಾಲ್ಟ್ ನಿಯಮಗಳ ಗುಂಪು uBlock Origin ನ ಡೀಫಾಲ್ಟ್ ಶೋಧಕ ಗುಂಪಿಗೆ ಅನುರೂಪವಾಗಿದೆ: - uBlock Origin ನ ಅಂತರ್ನಿರ್ಮಿತ ಶೋಧಕ ಪಟ್ಟಿಗಳು - EasyList - EasyPrivacy - ಪೀಟರ್ ಲೋ ಅವರ ಜಾಹೀರಾತು ಮತ್ತು ಟ್ರ್ಯಾಕಿಂಗ್ ಸರ್ವರ್ ಪಟ್ಟಿ ಆಯ್ಕೆಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನೀವು ಹೆಚ್ಚಿನ ನಿಯಮಗಳ ಗುಂಪುಗಳನ್ನು ಸಕ್ರಿಯಗೊಳಿಸಬಹುದು -- ಪಾಪಪ್ ಫಲಕದಲ್ಲಿ _ಗೇರ್ಗಳ_ ಐಕಾನ್ ಅನ್ನು ಕ್ಲಿಕ್ ಮಾಡಿ. uBOL ಸಂಪೂರ್ಣವಾಗಿ ಘೋಷಣಾತ್ಮಕವಾಗಿದೆ, ಅಂದರೆ ಶೋಧನೆ ನಡೆಯಲು ಶಾಶ್ವತ uBOL ಪ್ರಕ್ರಿಯೆಯ ಅಗತ್ಯವಿಲ್ಲ, ಮತ್ತು CSS/JS ಇಂಜೆಕ್ಷನ್-ಆಧಾರಿತ ವಿಷಯ ಶೋಧನೆಯನ್ನು ವಿಸ್ತರಣೆಯ ಬದಲಿಗೆ ಬ್ರೌಸರ್ ಸ್ವತಃ ವಿಶ್ವಾಸಾರ್ಹವಾಗಿ ನಿರ್ವಹಿಸುತ್ತದೆ. ಇದರರ್ಥ ವಿಷಯ ನಿರ್ಬಂಧಿಸುವಿಕೆಯು ನಡೆಯುತ್ತಿರುವಾಗ uBOL ಸ್ವತಃ CPU/ಮೆಮೊರಿ ಸಂಪನ್ಮೂಲಗಳನ್ನು ಬಳಸುವುದಿಲ್ಲ -- ನೀವು ಪಾಪ್ಅಪ್ ಪ್ಯಾನೆಲ್ ಅಥವಾ ಆಯ್ಕೆಯ ಪುಟಗಳೊಂದಿಗೆ ಸಂವಹನ ನಡೆಸಿದಾಗ uBOL ನ ಸೇವಾ ವರ್ಕರ್ ಪ್ರಕ್ರಿಯೆಯು _ಮಾತ್ರಾ_ ಅಗತ್ಯವಿದೆ.